Quick Intro:
“The best thing to hold onto in life is each other.” — Audrey Hepburn
Love is a very beautiful feeling. We get to see it in nature very often – the way earth receives the first rain, the way plants grow and responds to sunshine etc., Imagine what if the Cloud (ಮೇಘ) have fallen in love with the Sky (ಬಾನು) and also getting married to each other? How would that be..😯
Here’s what she has to say him, an imaginative poem which can be relatable to the one who’s marrying their love of life.😍 Hope you LIKE it and have YOU ever loved anyone? 👀 or How it would be to marry the one you have loved for long years?🧐 Do you even think the REAL LOVE exists?😉 Let us know your thoughts below in the comments.
“ನೀ ನನ್ನ ಬಾನು,
ನಾ ನಿನ್ನ ಮೇಘ,
ಸ್ನೇಹವಾಗಿದ್ದರೂ ನಮ್ಮಿಬ್ಬರದು ಬಲುಬೇಗ,
ಇಂದು ಕೂಡಿಬಂದಿಹುದು ನಮ್ಮೀ ಮಿಲನದ ಯೋಗ;
ಬಹುದಿನದ ಕನಸದು ನಿನ್ನ ಜೊತೆಯಿರಲು,
ಜೊತೆಯಿರುವೆ ನಿನ್ನೊಂದಿಗೆ ನಿನ್ನೆಲ್ಲಾ ಕಾಲದಲು;
ಸದಾ ಬಯಸಿರುವೆ ನಾ ನಿನ್ನ ಆಲಿಸುವ ಕಿವಿಯೆನ್ನ,
ಆಲಿಸು ನೀ ಮನದ ಮಾತುಗಳನ್ನ,
ಕಿವಿಕೊಟ್ಟು ಕೇಳಿಸಿಕೋ ಕೆಲವೊಮ್ಮೆ,
ನಾನಾಡದ ಮಾತುಗಳನ್ನ,
ನಾನಾಡದ ಮಾತುಗಳನ್ನ;
ಕೆಲವೊಮ್ಮೆ ನಿನಗೆ ಅಚ್ಚರಿಯಾಗುವ,
ಆ ನನ್ನ ಸಣ್ಣ ಪುಟ್ಟ ಸಂತೋಷಗಳು,
ಅದುವೆ ನನಗೆ ಬಾನಲ್ಲಿ ಮೂಡೊ ಕಾಮನಬಿಲ್ಲು,
ಅದುವೆ ನನಗೆ ಬಾನಲ್ಲಿ ಮೂಡೊ ಕಾಮನಬಿಲ್ಲು;
ಸಹಜವದು ಬರಲು ಆಗೊಮ್ಮೆ ಈಗೊಮ್ಮೆಸಿಡಿಲು,
ನಿರೀಕ್ಷಿಸುವೆ –
ಮೊದಲು ನೀನೇ ಬಂದು ಮಾತಾಡಿಸಲು,
ಮೊದಲು ನೀನೇ ಬಂದು ಮಾತಾಡಿಸಲು;
ನೀ ನನ್ನ ಬಾನು,
ನಾ ನಿನ್ನ ಮೇಘ,
ಶುರುವಾಗಿಹುದು ನಮ್ಮಿಬ್ಬರ ಜೀವನದಿ,
ಹೊಸದೊಂದು ಭಾಗ,
ತೆರೆದಿಹುದು ನಮ್ಮ ಹೊಸ ಕನಸಿನ ಬಾಗಿಲ ಬೀಗ;
ಮುಂಬರಲು ಹಲವಾರು ಯುಗ,
ಜೊತೆಯಿರುವೆವು ಇದ್ದಂತೆ ನಾವೀಗ,
ಅದುವೆ ಈ ಹೊಸ ಬಾಳಿನ ಹೊಸ ರಾಗ..
ಅದುವೆ ಈ ಹೊಸ ಬಾಳಿನ ಹೊಸ ರಾಗ..”