Skip to main content

Quick Intro:

“In all the world, there is no heart for me like yours. In all the world, there is no love for you like mine.” — Maya Angelou

At times we come across the phase wherein we feel that – one who is loving us, started showing the same feelings to others also😐 which probably might not be true always. In those situations no matter what the issue is, one will not concede to lose and cannot imagine the life without their loved one instead try to reassure every possible thing(s).
Here’s a similar ‘convincing story’ in this poem covering all those aspects,  hope it helps you recollect your own story (if there was any 😉) Hope you LIKE it. We would love your thoughts, please do comment! 😋

ಕಾಣಲಾರೆ ಯಾರಲೂ ನಾ ನಿನ್ನ,
ನೋಡಿದಂತೆ ಎಲ್ಲರಲೂ ನೀ ನನ್ನ;

ಯಾರೊಂದಿಗೂ ಹಂಚಲಾರೆ ನಿನ್ನ ಮೇಲಿರುವ  ಪ್ರೀತಿಯನ್ನ,
ತೋರಿದಂತೆ ಎಲ್ಲರೊಂದಿಗೆ ನೀ ಅದನ್ನ;

ಕೊಡ ಬಯಸುವೆ ನನ್ನೆಲ್ಲಾ ಪ್ರೀತಿಯನು,
ನಿನ್ನೊಬ್ಬಳಿಗೆಯೇ ಓ  ಚಿನ್ನ ,
ಅರಿಯಲೇಕೆ ಹಿಂಜರಿಯುತ್ತಿರುವೆ, ನೀ ನನ್ನ ಮನಸನ್ನ;

ಇರುವೆನೆಂದು ದೃಢಪಡಿಸಿರಲು ನಾ ನಿನ್ನ ಜೊತೆ,
ಮತ್ತೇಕೆ ಅನುಮಾನಿಸಿ ಪಡುತಿರುವೆ ನೀ – ವ್ಯಥೆ;

 ನನ್ನಲ್ಲಿರಲು ಕ್ಷಮೆ ನಿನ್ನೆಲ್ಲಾ ತಪ್ಪಿಗಾಗಿ,
ಎಂದಿಗೂ ಭಾವಿಸಬೇಡ ನನ್ನ ಪ್ರೀತಿಯನು ತಪ್ಪಾಗಿ;

ಕೊಡು ನೀ ನಿನ್ನೆಲ್ಲಾ ಸುಖ ದುಃಖಗಳನು ಎನಗೆ,
ಅಡಗಿಹುದು ನನ್ನ ಸಂತೋಷವು ನಿನ್ನೊಂದಿಗೆ,
ನೀನಿಲ್ಲದ ಜೀವನವ ಊಹಿಸುವುದಾದರೂ ಹೇಗೆ..?
ನೀನಿಲ್ಲದ ಜೀವನವ ಊಹಿಸುವುದಾದರೂ ಹೇಗೆ…??”

 

Rajesh Raj

Author / Administrator

Leave a Reply