Quick Intro:
“We are not your typical bridesmaids, we are your women of awesomeness.” — Childhood Friends for Ever
It’s a nasty moment when you get to know one of your childhood friends is getting married and you have no one around to pull the leg, crack silly jokes, make gossips and pass comments together on everyone and everything 😉
On this special occasion 🌈 of her marriage here’s a poem, we wish to dedicate to our world’s best-childhood friend. Hope you LIKE it, don’t forget to comment down your thoughts💭
“ನಿನ್ನ ತುಂಟುತನದ ಪ್ರಪಂಚದಲೊಂದು,
ಮದುವೆಯಂಬ ತಂಗಾಳಿ ಬೀಸಿಬಂದು,
ವಸಂತ ಮಾಸದಲ್ಲೇ ಕಾಲಿಟ್ಟಿರುವೆ ಹೊಸ ಜೀವನಕ್ಕಿಂದು,
ನಾ ಹೇಗೆ ಸಂತೈಸಲಿ ನನ್ನ ಮನಸ್ಸಿಗೆ,
ಇನ್ನು ನೀ ನಮ್ಮೊಂದಿಗೆ ಇಲ್ಲವೆಂದು,
ಇನ್ನು ನೀ ನಮ್ಮೊಂದಿಗೆ ಇಲ್ಲವೆಂದು;
ಬೆಳೆದೆ ನೀ ನಮ್ಮೊಡನೆ,
ಕಲಿತೆ ನೀ ನಮ್ಮೊಡನೆ,
ಅರಿಯದೆ ಬೆರೆತು ಹೋದೆ ನೀ ನಮ್ಮ ಮನದೊಡನೆ,
ಅರಿತು ಬೆರೆತುಕೊಂಡಿದ್ದ ನಮ್ಮ ಸ್ನೇಹವ ತೊರೆದು,
ಹೊರಟುನಿಂತಿರುವೆ ನೀ ಇಂದು;
ಯಾರು ಕೊಡದಷ್ಟು ಪ್ರೀತಿಯ ತುಂಬಿತಂದು,
ತುಸು ದೂರ ನಿಂತಿಹರು ನಿನಗಾಗಿ ಕರೆದು,
ಹೊರಡಬೇಕಾಗಿದೆ ನೀ ಇಂದು,
ಹೊರಡಬೇಕಾಗಿದೆ ನೀ ಇಂದು;☹️
ನೀ ಇದ್ದೇ ಇಷ್ಟು ದಿನ,
ನಮ್ಮ ಗೆಳೆತಿಯಾಗಿ,
ನಮ್ಮ ಜೊತೆಯಾಗಿ,
ಬಿಡಲಾರೆವೆಂದರು – ನೀ ಹೋಗಬೇಕಾಗಿದೆ,
ಅವರ ಜೊತೆಯಾಗಿ, ಅವರ ಸಂಗಾತಿಯಾಗಿ;
ಬರೀ ಸುಖ ಸಂತೋಷದಿಂದಲೇ,
ತುಂಬಿರಲಿ ನಿನ್ನ ಜೀವನ,
ಸದಾ ನಗುತಿರೆಂದು,
ಆಶಿಸುವೆವು ತುಂಬಿ ನಮ್ಮ ಮನ,
ಎಂದಿಗೂ ಮರೆಯಬೇಡ ನಮ್ಮೊಂದಿಗಿದ್ದ ಈ ಗೆಳೆತನ..
ಎಂದಿಗೂ ಮರೆಯಬೇಡ ನಮ್ಮೊಂದಿಗಿದ್ದ ಈ ಗೆಳೆತನ..;”
ಹೊಸ ಜೀವನದ ಈ ಹೊಸ ಬಾಳಿನ,
ನಿನ್ನ ಈ ದಾರಿ ಸುಗಮವಾಗಿರಲಿ,
– ಇಂತಿ ನಿನ್ನ ಪ್ರೀತಿಯ,
Childhood Friends for Ever!😋