Quick Intro:
“Don’t ever save anything for a special occasion. Being alive is the special occasion.” — Thomas S. Monson
We all inadvertently save some’things’ in our lives for a special moment, without even realizing that there is no such ‘special’ moment but it’s all in our mind that how we treat every moment and feel towards it.
Here’s a poem describing one such ‘moment of realization’ with a message that – we should live life to the fullest and saving something would just be memories that we cannot relive again. Good Luck with your Life!
Hope you LIKE this poem, feel FREE to comment your thoughts 💭 below which encourages us to write more 😊
“ನೆನಪೊಂದರ ಗೂಡಲಿ,
ಬಚ್ಚಿಟ್ಟೆ ನನ್ನೆಲ್ಲಾ ನೆನಪುಗಳ,
ಅಳಿಸಲಾಗದಂತಹ ನೆನಪುಗಳು ಕೆಲವು,
ಅಳೆಯಲಾಗದಂತಹ ನೆನಪುಗಳು ಹಲವು,
ನೆಪವಿಲ್ಲದೆ ನೆನಪಾಗುವ ನನ್ನೆಲ್ಲಾ
ಸಂತೋಷದ ಕ್ಷಣಗಳೇ ಈ ನೆನಪುಗಳು;
ಕಳೆದಿರಲು ಸಮಯವು, ಅದರ ನೆನಪುಗಳಲ್ಲಾ,
ನೆನಪುಗಳವು ಉಳಿದಿರಲು ಇಂದಿಗೂ,
ಆ ನೆನಪೊಂದರ ಗೂಡಲಿ,
ನೆನೆದಾಗ ಖುಷಿಯ ಕೊಡುವುದು,
ಮನ ಅದಾವುದೆ ಸ್ಥಿತಿಯಲ್ಲಿರಲಿ,
ಮನ ಅದಾವುದೆ ಸ್ಥಿತಿಯಲ್ಲಿರಲಿ;
ಇನ್ನು – ನೆನಪದು ಆ ಎಲ್ಲಾ ದಿನಗಳು,
ಮತ್ತೆಂದೂ ಮರುಕಳಿಸದು,
ಮತ್ತೆಂದೂ ಮರುಕಳಿಸದು;
ನೆನೆಪೊಂದರ ಗೂಡಲಿ,
ಬಚ್ಚಿಟ್ಟೆ ನನ್ನೆಲ್ಲಾ ನೆನಪುಗಳ,
ತಪ್ಪು ಅರಿವಾಗಿದೆ ಇಂದು –
ಬಚ್ಚಿಡುವ ಬದಲು ಬಿಚ್ಚಿಡಬೇಕಿತ್ತು ನಾ ಅದನು,
ಬಚ್ಚಿಡುವ ಬದಲು ಬಿಚ್ಚಿಡಬೇಕಿತ್ತು ನಾ ಅದನು;
ಬಚ್ಚಿಡೆನು ನಾ ಇನ್ನೆನನು,
ಓ ನೆನಪೇ ಈ ನೆನಪ,
ತಲುಪಿಸು ಅವರ ಮನದಲಿ,
ಮರುಕಳಿಸದಿದ್ದರು ಆ ದಿನಗಳು,
ಬೇಸರವಿಲ್ಲ ನನಗೆ,
ಮರುಕಳಿಸಬೇಕಷ್ಟೇ ಆ ದಿನದ ಸಂತೋಷವು,
ಬೀರುತಲಿ ಅವರ ಮುಖದಿ ಆ ಕಿರುನಗೆ..
ಬೀರುತಲಿ ಅವರ ಮುಖದಿ ಆ ಕಿರುನಗೆ..”