Quick Intro:
“Our lives begin to end the day we become silent about things that matter.” — Martin Luther King Jr.
Often people won’t speak up when they really have to. They may be scared of hurting another person, looking mean or foolish and might think it will make a mess in everyone’s lives. Sometimes it seems like staying silent is the wiser choice but not always.😒 Your silence can be a deemed approval and no one can know what you feel and think unless you speak it up. If you wait around for people to notice or read your mind, you will likely end up on many paths that are not of your own choosing.
Here’s a poem describing one such situation. A friend who’s trying to convince the other being there as a support. Hope you LIKE it and please do comment your thoughts.😊
ಆಸೆಗಳ ಕೂಡಿಟ್ಟಿರುವೆ,
ನಿನ್ನ ನಿರಾಸೆಯೆ ಕಣ್ಮುಂದಿರಲು.
ನಗುವೆ ಹೇಗೆ ನೀನು,
ನಿನ್ನೊಳಗೆ ಮೌನವೆ ತುಂಬಿರಲು;
ನಿನ್ನ ಮೌನದಲೂ ನಾ ಆಲಿಸಬಲ್ಲೆ,
ನೀನಾಡದ ಮಾತುಗಳ,
ಸೋತರೇಕೆ ಎಲ್ಲರು,
ಅರಿಯಲು ನಿನ್ನ ಮನದ ಆಳ; (2)
ಒಡೆದಿರಲು ನಿನ್ನ ಆಸೆಗಳ ಕನ್ನಡಿ,
ಕಾಣದಾಗಿದೆ ನಿನ್ನ ಆಕಾಂಕ್ಷೆಗಳು ಅದರಲಿ,
ನಿರ್ಲಕ್ಷಿಸಿರಲು ಎಲ್ಲರು ನಿನ್ನ ಭಾವನೆಯ ನುಡಿ,
ಮುರಿಯದೇಕೆ ನಿನ್ನ ಮೌನವು, ಇದನ್ನೆಲ್ಲಾ ನೋಡಿ,
ಹೇಳು,
ಈ ಮೌನದಿ ಹೇಗೆ ಬರೆಯುವೆ ನಿನ್ನ
ಹೊಸ ಜೀವನದ ಮುನ್ನುಡಿ? (2)
ಆಸೆಗಳ ಕೂಡಿಟ್ಟಿರುವೆ,
ನಿನ್ನ ನಿರಾಸೆಯೆ ಕಣ್ಮುಂದಿರಲು.
ಖುಷಿಯನ್ನೆ ನಾ ಬಚ್ಚಿಟ್ಟಿರುವೆ,
ಮೊದಲು ನಿನ್ನ ಸಂತೋಷವನು ನಾ ಕಾಣಲು;
ನಿನ್ನ ಸುಖ ದುಃಖಗಳಲಿ
ಇರಲಿ ನನಗೂ ಪಾಲು,
ಜೊತೆಯಿರುವೆ ಕೊನೆಯವರೆಗೂ,
ನಿನ್ನ ಸ್ನೇಹವಿರಲಿ ನನಗೇ ಮೀಸಲು..
ನಿನ್ನ ಸ್ನೇಹವಿರಲಿ ನನಗೇ ಮೀಸಲು..