Quick Intro:
“Nobody can do for little children what grandparents do. Grandparents sort of sprinkle stardust over the lives of little children.” — Alex Haley
Having a Grandmother is such a blissful feeling. Though we didn’t realize their worth initially, we did – as we grew up. Being with her makes our life easy and seeing through her perspective we see the other side of this world – so wonderful. Though words are deficient to express, have tried a bit to covey my feelings towards my granny☹️
Hope you LIKE this elegy and please do comment down your thoughts.
“ಜೀವವದು ಎಲ್ಲವನ್ನು ಕಂಡಿಹುದು,
ಜೀವವದು ಎಲ್ಲವನ್ನು ಅರಿತಿಹುದು,
ಜೀವವದು ಜೀವನವ ಕೊಟ್ಟಿರಲು,
ನಿಸ್ವಾರ್ಥ ಪ್ರೀತಿಯ ಹಂಚಿರಲು,
ನಿಷ್ಕಲ್ಮಷ ಭಾವನೆಯುಳ್ಳ ಜೀವವದು,
ಜೀವವದು ಇನ್ನಿಲ್ಲವಾದದ್ದು;
ಓ ನನ್ನ ಪ್ರೀತಿಯ ಅಜ್ಜಿ,
ಮತ್ತೆ ಹುಟ್ಟಿ ಬಾ,
ಬಾಳಲಿದೆ ನಮ್ಮೆಲ್ಲರಿಗೂ ನಿನ್ನೊಂದಿಗೆ,
ಬಾಳಲಿದೆ ನಮ್ಮೆಲ್ಲರಿಗೂ ನಿನ್ನೊಂದಿಗೆ..
ನೀ ಹೇಳಿದ ಕಥೆಯು, ಇನ್ನು ಕಿವಿಯಲ್ಲೇಇಹುದು,
ದೂರಾಗಬೇಡ ನಮ್ಮ ನೆನಪುಗಳಿಂದ,
ಮರೆಯೆಲ್ಲಾ ನಾ ನಿನ್ನನು;
ಕ್ಷಮೆಯಿರಲಿ ನಮ್ಮೆಲ್ಲರ ತಪ್ಪಿಗಾಗಿ,
ಎಲ್ಲೇ ಇದ್ದರು ಹೇಗೇ ಇದ್ದರೂ,
ಆಶೀರ್ವದಿಸು ನೀ ನಮ್ಮೆಲ್ಲರನು.. [2]
ಕೊಡಲೇನು ಆಗಲಿಲ್ಲಾ ನಾ ನಿನಗೆ,
ಆದರೆ ನೀ ಕೊಟ್ಟದ್ದು ಬಹಳಷ್ಟಿದೆ ನನ್ನೊಂದಿಗೆ,
ಮರೆಯಲ್ಲಾ ನಾ ಕಳೆದಯಾವ ಕ್ಷಣವನು ನಿನ್ನೊಂದಿಗೆ,
ಮೆಲುಕಾಕುವೆ ನಾ ಅದನು ಮುಂದಿನ ಪೀಳಿಗೆಯವರಿಗೆ,
ಬೇಸರವೊಂದೇ ಅಜ್ಜಿ,
ಕೊಡಲೇನು ಆಗಲಿಲ್ಲ ನಾ ನಿನಗೆ,
ಕೊಡಲೇನು ಆಗಲಿಲ್ಲ ನಾ ನಿನಗೆ..”
Such a beautiful poem.. Reminded me about my late granny…thanks bro
Like!! Thank you for publishing this awesome article.