Intro:
“The loss of a friend is like that of a limb; time may heal the anguish of the wound, but the loss cannot be repaired.” — Robert Southey
It was a Monday morning around 8.30 am when I received a message saying ‘he’ is no more with us. What could be so bad then this which could strike anyone on the start of the week. Was lost in the world of memories for few minutes immediate next moment started to pen down my overwhelming thoughts.
Friendship and Love are the things in this world which are more powerful than death. Even if you don’t see your friend again, Even if you don’t see your loved ones again, your bond and all your love still matter. It was not recently but I have heard this message a few years ago same emotions with different thoughts and lots of memories left behind and one beautiful thing about these memories is that they help us emotionally reconnect with your friends/loved ones.
One very common mistake which we all do is to planning and saving the moments, the moments which are not in our control all the time, instead – if you learn to live in the moments and do the things then and there when you feel it, you could have fewer things at the end to feel regretted for and on missing someone we feel happy that we enjoyed the life and we made the most of it.
Always keep in mind that life can end at any moment and you need to make the best of it so you can truly say you’ve enjoyed life to the fullest and don’t let your memories fade away.
Have you ever missed someone suddenly from your life? How did you deal with it and How did you overcome? Do let us know in below comments and here is the poem dedicated to our demised friend.
“ನೀನಿಲ್ಲವೆಂಬ ವಿಷಯವ ಹೊತ್ತು ತಂದ
ಸಂದೇಶಕೆ ಆಘಾತ,
ಅರಗಿಸಿಕೊಳ್ಳುವುದು ಹೇಗೆ,
ಇದು ಬಹು ಅನಿರೀಕ್ಷಿತ;
ಕಾಡಿದೆ ನಿನ್ನೊಂದಿಗಿದ್ದ,
ಆ ಬಾಲ್ಯದ ನೆನಪುಗಳು,
ಇಂದಿಗೂ ನಗುತರುವ ನಿನ್ನ,
ಆ ಮಿತಿಮೀರಿದ ಹಾಸ್ಯಗಳು,
ನೋವಾಗಿದೆ ಎನಗೆ ನೆನೆದು,
ಆ ದಿನಗಳೆಲ್ಲವನು,
ಮೂಡಿದ ಬಹುದೊಡ್ಡ ಪ್ರಶ್ನೆ ಒಂದೇ,
ಇಷ್ಟೆ ಏನು ನಮ್ಮ ಸಂಬಂಧವು ಈ ಜನುಮಕೆ?
ಇಷ್ಟೆ ಏನು ನಮ್ಮ ಸಂಬಂಧವು ಈ ಜನುಮಕೆ?
ಇಂದಿಗೂ ನಂಬಿರುವೆವು,
ನೀ ಹೇಳಿದ್ದ ಎಲ್ಲಾ ಕಥೆಗಳ;
ಆದರೆ ನಂಬದಿರಲು ಮನ,
ಇದೊಂದು ವಿಷಯದಲಿ;
ಬೇರೆ ಎಲ್ಲರಿಗೂ ನೀ ಇಲ್ಲವೆಂದರೂ
ನಮಗೆ ನೀ ಇರುವೆ,
ಇರುವೆ ನೀ ನಮ್ಮ ಮನದಲಿ,
ನಮ್ಮೆಲ್ಲರ ನೆನಪುಗಳಲ್ಲಿ,
ನಮ್ಮೆಲ್ಲರ ನೆನಪುಗಳಲ್ಲಿ;
ನಮ್ಮ ಶಾಲೆಯ ನೀ ಇಷ್ಟ ಪಟ್ಟ
ಹುಡುಗಿ ಬಂದಿಹಳು,
ಓಡಿ ಬಾ ಓ ಗೆಳೆಯ;
Tuitionನಿನ ಆ ಹುಡುಗಿ,
ನಿನ್ನ ಒಪ್ಪಿರುವಳು,
ಬಾ ಬೇಗ ಓ ಗೆಳೆಯ;
ಹುಸಿ ಭರವಸೆಗಳಿವು,
ನೀ ಬಂದರೆ ನಿಜವಾಗಬಹುದು,
ಮರಳಿ ಬಂದು ನೋಡು ನೀನು,
ಓ ನನ್ನ ಗೆಳೆಯ,
ಮರಳಿ ಬಂದು ನೋಡು ನೀನು,
ಓ ನನ್ನ ಗೆಳೆಯ;
ನೀ ಇಷ್ಟು ಬೇಗ ನಮ್ಮ ಅಗಲಿದರೆ,
ಹೇಗೆ ಇರಲಿ ನಾ ಸುಮ್ಮನೆ,
ಕಾರಣವದು ಮನವರಿಕೆ ಆಗದು,
ಅನಿಸಿಹುದು ಮರಳಿ ಎಳೆ ತರಲು ನಿನ್ನ,
ದರ ದರನೇ..
Please ಮರಳಿ ಬಾ,
ಬದುಕಲಿದೆ ನಮ್ಮೆಲ್ಲರಿಗೂ ನಿನ್ನೊಂದಿಗೆ,
ಓ ನಮ್ಮ ಶ್ರೀಧರನೇ,
ಬದುಕಲಿದೆ ನಮ್ಮೆಲ್ಲರಿಗೂ ನಿನ್ನೊಂದಿಗೆ,
ಓ ನಮ್ಮ ಶ್ರೀಧರನೇ..”