Quick Intro:
“Nothing makes the earth seem so spacious as to have friends at a distance; they make the latitudes and longitudes.” — Henry David Thoreau
In the course of Life, we meet some people so special, whom we think to have them by our side, in our life always – as a friend (at the first place) and the initial impulsive feelings do not let to miss them for any reason.
But what If even that person is feeling the same towards you? Yes, this hardly happens in life and so you have to experience it before you feel it. We hope anyone CAN experience it reading this poem 😉 and here it is true, for the person in the poem. No, we are not talking about having a crush. 🙄
Here’s what has happened exactly, read the poem and it is relatable to anyone who had the chance to make a distant friendship without even seeing to each other in their life. Hope you LIKE it, feel FREE to comment your thoughts 💭 below which encourages us to write more 😊
“ನನಗೆ ಅರಿಯದಂತೆ ನಾ ಬೆರೆತೆ ನಿನ್ನಲಿ,
ನಿನ್ನ ಮುಗ್ಧ ಮಾತಲಿ,
ಬೆರೆತು, ಮರೆತೆ ನಾ ನನ್ನಲಿ,
ನನ್ನ ಈ ಮನದಲಿ;
ಭ್ರಮಿಸಿದ್ದೆನು ನೀ ಇರುವುದೆಂದು ಆಗಸದಲಿ,
ನನಗೆಂದೂ ಎಟುಕದ ಅಂತರದಲಿ,
ಅಷ್ಟರಲ್ಲಾಗಲೇ ನೀ ಬಂದಿದ್ದೆ ನನ್ನ ಮನದ ಹಾದಿಯಲಿ,
ಮುಗ್ಧನಗೆಯೊಂದನು ಬೀರುತಲಿ;
ನೋಡದಿದ್ದರೂ ನಾವಿಬ್ಬರು ಒಬ್ಬರಿನ್ನೊಬ್ಬರನ್ನ,
ನೋಡದಿದ್ದರೂ ನಾವಿಬ್ಬರು ಒಬ್ಬರಿನ್ನೊಬ್ಬರನ್ನ,
ಮೂಡಿರುವ ಈ ಭಾಂದವ್ಯವೇ ಬಲು ವಿಭಿನ್ನ,
ಅದನ್ನು – ಸ್ನೇಹವಾಗಿಸೋಣ,
ಅದನ್ನು – ಸ್ನೇಹವಾಗಿಸೋಣ;
ಮಾತಾಗಿಹುದು ನಮ್ಮಿಬರಲಿ ಹಲವು,
ಹೇಳಲೇ ಬೇಕಾದಂತವು ಇನ್ನು ಉಳಿದಿವೆ ಹೇಳವು,
ಸದಾ ನಮ್ಮೊಂದಿಗಿರಲಿ – ಆ ಮಾತಿನ ಒಲವು,
ಸದಾ ನಮ್ಮೊಂದಿಗಿರಲಿ – ಆ ಮಾತಿನ ಒಲವು;
ನಮ್ಮಿ ಸ್ನೇಹದಲಿ, ಸದಾ ಜೊತೆಗಿರುವೆನು,
ನೀನೆಲ್ಲಾ ಸುಖ-ದುಃಖಗಳಲ್ಲಿ, ಬೇರೇನನು ಬಯಸದೆ,
ಬಾ ಸಾಗೋಣ ನಾವು –
ಈ ಸ್ನೇಹದ ಕಡಲಲಿ..
ಈ ಸ್ನೇಹದ ಕಡಲಲಿ..”