Skip to main content

Quick Intro:

“I’m stuck. I’m stuck in yesterday, and you’re tomorrow.”
— Rebecca Donovan, (Out of Breath)

In our life at some point of time, we are hit by this thought that ‘Realizing that finding someone to love is a lot easier than finding someone to love you’, this could be late realization but its never too late to make it up.

In a sense, you miss noticing in the race of finding the best one for you while ignoring the one who you can make by your side forever. Love has been in your life since you were born and you realize that it has many of its forms as you grow up. Love can easily be compared with a Rainbow, though we can define its colors (VIBGYOR) surprisingly there are plenty of other color formations hidden in it as like the love.

Here is a poem describing the Love with same comparison along with a late realization and this could easily be relatable to whomsoever as they read on.

Let us know your thoughts 💭 below.😊

“ಹಿಂತಿರುಗಿಸಿ ನನ್ನ,
ಜೀವನದ ಪುಟಗಳೆಲ್ಲವನ್ನ,
ಕಂಡಿರುವೆ ನಾ ನೀನಿದ್ದ ದಿನಗಳ ಮಾತ್ರ,
ಆ ದಿನಗಳಂದೇ ನಾ ಕಂಡದ್ದು
ಖುಷಿಯನ್ನು ಬಹು ಹತ್ತಿರ,
ಖುಷಿಯನ್ನು ಬಹು ಹತ್ತಿರ;

ಓ ಒಲವೇ,
ನಿನ್ನಲ್ಲಿರಲು ಆ ಕಾಮನಬಿಲ್ಲಿನ ಬಣ್ಣಗಳು,
ಜೀವನದ ಒಂದ್ದೊಂದು ಪುಟದಲ್ಲೂ,
ನೀ ತೋರುವೆ ಒಂದೊಂದು ಬಣ್ಣಗಳು;

ಕಾಮನಬಿಲ್ಲದು ಕಾಣುವುದು ಒಮ್ಮೊಮ್ಮೆ,
ಸೇರಿದಾಗ ಆ ಮಳೆಯ ಹನಿಯು ಆ ಸೂರ್ಯನ ಕಿರಣದೊಡನೆ;

ಕಾಮನಬಿಲ್ಲದು ಕಾಣದು ಎಲ್ಲರಿಗೂ,
ಕಂಡಾಗ ನೋಡದೆ ಇರುವರು ಕೆಲವರು,
ಕಂಡರೂ ಕಾಣದಂತೆ ನಟಿಸುವರು ಹಲವರು,
ಕಂಡು, ನೋಡಿ ಸಂತಸದಿ ಸೆರೆಹಿಡಿಯುವಷ್ಟರಲ್ಲಿ,
ಕಾಣೆಯಾಗುವ ಆ ಕಾಮನಬಿಲ್ಲು,
ಒಲವೇ ಒಂದು ಕಾಮನಬಿಲ್ಲು;

ಓ ನನ್ನ ಒಲವೇ,
ನೀ ಆಗದಿರು ಆ ಕಾಮನಬಿಲ್ಲು,
ಬಿಡೆನಾ ನಿನ್ನ ಮಾಯವಾಗಲೆಲ್ಲೂ,
ಬಂಧಿಸಿಡುವೆ ನಾ ನಿನ್ನ,
ನಿನ್ನಾ ಎಲ್ಲಾ ಬಣ್ಣಗಳನ್ನ,
ಸದಾ ಬೀರುತಿರಲು ನನ್ನೀ ಪ್ರೀತಿಯ ಕಿರಣಗಳು,
ನಿನ್ನ ಮುಗ್ಧ ಪ್ರೀತಿಯ ಹನಿಗಳೊಡನೆ;

ಬಂಧಿಯಲ್ಲ ನೀ – ಬಂಧು ಎನಗೆ,
ಬಂದಿರಲು ಈ ಜೀವನದಲಿ ನೀ – ತಿಳಿಯದಂತೆ ನನಗೆ,
ಬರೆದಿಡುವೆ ನನ್ನೆಲ್ಲಾ ಸಂತೋಷವನು ನಿನಗೆ,
ನಿನ್ನ ಸಂತೋಷದಲಿ ಇರಬಯಸುವೆ ನಾ ಜೊತೆಗೆ,
ನಿನ್ನ ಸಂತೋಷದಲಿ ಇರಬಯಸುವೆ ನಾ ಜೊತೆಗೆ;

ಹಿಂತಿರುಗಿಸಿ ನನ್ನ,
ಜೀವನದ ಪುಟಗಳೆಲ್ಲವನ್ನ,
ಅರಿವಾಗಿದೆ ನನ್ನೀ ಜೀವನ,
ಬಿಡಬಾರದೆಂದು ಆ ಒಲವೊಂದನ;

ಇರುವೆ ನಾ ನಿನ್ನ ನೆನಪಿನ ಪುಟಗಳೊಂದಿಗೆ,
ಒಮ್ಮೆ ಹಿಂತಿರುಗಿಸಿ ನೋಡು,
ಸಿಗುವೆ ನಾ ಅಲ್ಲಿ ನಿನಗೆ;
ಕಾಯುತ್ತಿರುವೆ ನಿನ್ನ ನೆನಪಿನಲಿ,
ಕರೆದೊಯ್ಯು ಬಾ ಬೇಗ ನನ್ನ ಇಲ್ಲಿಂದಲಿ,
ಕರೆದೊಯ್ಯು ಬಾ ಬೇಗ ನನ್ನ ಇಲ್ಲಿಂದಲಿ.. ”

We hope enjoyed reading this post. Do Share, Comment, Follow & stay connected on Instagram | Facebook | Twitter & hit the ❤️ below!
Rajesh Raj

Author / Administrator

Leave a Reply