Quick Intro:
“Never leave a true relationship for a few faults. Nobody is perfect, nobody is correct, and in the end, affection is always greater than perfection.”
— Unknown Quote
Healthy fights make a relationship vigorous, it just makes the bond between the two stronger. Small fights and patch-ups show up the amount of care and love they have for each other. Healthy fights always bring out the best in relationships.
Here’s a poem describing the situation after a healthy fight meanwhile realizing why he/she ask for the forgiveness every time no matter who or what’s the reason for the fight was. The poem is a bit funny but at the same time a relatable poem to everyone.
Hope this helps someone – find the reason (if they aren’t aware) why they always end up saying sorry in their relationship. Having said that not all the one’s who ask for the forgiveness remark that they have made the mistake, it sometimes also means that relationship/love is more important than a silly fight 😉
We hope you like this poem, feel FREE to comment your thoughts 💭 below which also encourages us to write more😊
“ಕ್ಷಮಿಸಿಲ್ಲಾ ಯಾರನೂ,
ಕ್ಷಮಿಸಿದಷ್ಟು ನಾ ನಿನ್ನ,
ಕ್ರಮಿಸಲಿಲ್ಲಾ ಯಾರು,
ಆಕ್ರಮಿಸಿದಷ್ಟು ನೀ ನನ್ನ ಮನ,
ಏನಿರಬಹುದು ಇದಕ್ಕೆ ಕಾರಣ?
ಏನಿರಬಹುದು ಇದಕ್ಕೆ ಕಾರಣ?
ಜಗಳವಾಗಿಹುದು ನಮ್ಮಲ್ಲಿ ಹಲವು ಬಾರಿ,
ಕೊನೆಯಲ್ಲಿ ಕೇಳುವುದು ಮಾತ್ರ – ನಾನೇ Sorry,
ಮೂಡಿರಲು ಏಕೆಂದು ಈ ವಿಷಯದಿ ಅಚ್ಚರಿ,
ಮೂಡಿರಲು ಏಕೆಂದು ಈ ವಿಷಯದಿ ಅಚ್ಚರಿ;
ಪ್ರತಿದಿನವೂ ನನ್ನೆಲ್ಲಾ ವಿಷಯದಿ,
ಇರಲು ನಿನ್ನ ಹಾಜರಿ,
ಒಂದೊಮ್ಮೆ ಮರೆತರೂ ನಾ ನನ್ನ ಗುರಿ,
ಬಂದು ತೋರುವೆ ನೀ ಅದಕೆ ಸರಿ ದಾರಿ,
ನೀನಾಗಿರುವೆ ನಮ್ಮ ಜೀವನದ ರೂವಾರಿ,
ನಿನ್ನ ಪ್ರೀತಿಯೊಂದು ಜೊತೆಯಿದ್ದರೆ,
ಜೀವನವಾಗುವುದು ಒಂದು Wonderful ಸವಾರಿ,
ಜೀವನವಾಗುವುದು ಒಂದು Wonderful ಸವಾರಿ;
ನಿನ್ನೀ ಪ್ರೀತಿಯಿದು,
ಎಲ್ಲದರ ಮಿತಿಯ ಮೀರಿ,
ಆದರೆ, ಬರುವುದೇಕೋ ನಾಕಾಣೆ,
ಆ ಕೋಪವು ಬಾರಿ ಬಾರಿ,
ಕೋಪದಲೂ ನನಗಿಷ್ಟ,
ನೀ ತೋರುವ ಆ ಕಾಳಜಿಯ ಪರಿ,
ನೀನಾಗಿರಲು ನನ್ನ ಸಂತೋಷದ ಸಿರಿ,
ನಾನಾಗಿಹೆನು ನಿನಗೆ ಆಬಾರಿ,
ನಾನಾಗಿಹೆನು ನಿನಗೆ ಆಬಾರಿ;
ಕ್ಷಮಿಸಿಲ್ಲಾ ಯಾರನೂ,
ಕ್ಷಮಿಸಿದಷ್ಟು ನಾ ನಿನ್ನ,
ಕ್ರಮಿಸಲಿಲ್ಲಾ ಯಾರು,
ಆಕ್ರಮಿಸಿದಷ್ಟು ನೀ ನನ್ನ ಮನ,
ಇದುವೆ ಆ ಕ್ಷಮೆಯ ಹಿಂದಿರುವ ಕಾರಣ,
ಇದುವೆ ಆ ಕ್ಷಮೆಯ ಹಿಂದಿರುವ ಕಾರಣ”
Wow awesome
Superb. Looking for more poetry like this.